Skip to main content
ಇತಿಹಾಸದ ಪರಿಚಯ :-- ಇತಿಹಾಸ ಎಂದರೇನು? ಹಿಂದೆ ನಡೆದು ಹೋದ ಸಂಗತಿಗಳನ್ನು ಕ್ರಮಬದ್ಧವಾಗಿ ಹೇಳುವುದೇ ಇತಿಹಾಸ. ಇತಿಹಾಸ ಎಂದರೆ ಕಥೆ ಆಗ ಬಹುದಾ? ಇಲ್ಲ. ಕಥೆಗೆ ಖಚಿತತೆ ಇಲ್ಲ. ಆದರೆ ಇತಿಹಾಸಕ್ಕೆ ಖಚಿತ ಪುರಾವೆ ದಾಖಲೆಗಳಿವೆ. ಕಥೆಯೆಂದರೆ ಒಂದಾನೊಂದು ಕಾಲದಲ್ಲಿ ಒಂದಾನೊಂದು ಊರಿನಲ್ಲಿ ಒಬ್ಬ ರಾಜನಿದ್ದ. ಆದರೆ ಇತಿಹಾಸದಲ್ಲಿ ಹಾಗಲ್ಲ. ಸಾಮಾನ್ಯ ಶಕ ಪೂರ್ವ 261 ರಲ್ಲಿ ಪಾಟಲಿಪುತ್ರದಲ್ಲಿ ಅಶೋಕನೆಂಬ ಆಳುತ್ತಿದ್ದನು. ಕಥೆಗೂ ಮತ್ತು ಇತಿಹಾಸಕ್ಕೂ ವ್ಯತ್ಯಾಸವಿದೆ ಇತಿಹಾಸ ಒಂದು ಸ್ಮರಣಶಕ್ತಿ ಇದ್ದಹಾಗೆ. ನಮಗೆ ಇತಿಹಾಸ ಏಕೆ ಬೇಕು? ಹಿಂದಿನ ಕಲ್ಪನೆ ನೆನಪಿಗೆ ಬರುತ್ತದೆ ಇದು ಕೂಡ ಹಿಂದಿನದನ್ನು ನೆನಪಿಸಿಕೊಳ್ಳುವ ಸ್ಮರಣಶಕ್ತಿ ಎಂದು ಹೇಳಬಹುದು. ಇತಿಹಾಸದ ಪಿತಾಮಹ ಗ್ರೀಕ್ ದೇಶದ ಹೆರೋಡೋಟಸ್ ಇದಕ್ಕೆ ಪೂರಕವಾಗಿ ಇಲ್ಲಿ ಒಂದು ಚಟುವಟಿಕೆ ಮಕ್ಕಳಿಗೆ ಹೇಳಬಹುದು ಅದೇನೆಂದರೆ ಮಕ್ಕಳಿಗೆ ನೀವು ನಿಮ್ಮ ಮನೆಯಲ್ಲಿರುವ ನೋಟು ನಾಣ್ಯಗಳ ಮೇಲೆ ಇರುವ ಫೋಟೋ ಇದೆ ಎಂದು ಬರೆಯಲು ಹೇಳುವುದು. ಕ್ಷೇತ್ರ ದರ್ಶನಕ್ಕಾಗಿ ನಿಮ್ಮ ಊರಿನ ಬೆಟ್ಟ ಅಥವಾ ದೇವಾಲಯದ ಅರ್ಚಕರಿಗೆ ಭೇಟಿ ಮಾಡಿ ದೇವಾಲಯ ಕಟ್ಟಿಸಿದವರು ಯಾರು ಕಟ್ಟಿದರು ಮತ್ತು ಯಾವ ಇಸವಿಯಲ್ಲಿ ಕಟ್ಟಿದರು ಎಂಬುದನ್ನು ಬರೆದುಕೊಂಡು ಬರಲು ಹೇಳುವುದು ಮತ್ತು ನಿಮ್ಮ ತಾತಮುತ್ತಾತರ ತಂದೆಯವರ ಹೆಸರನ್ನು ಬರೆಯಲು ಹೇಳುವುದು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಮಗುವಿಗೆ ಇತಿಹಾಸದ ಪರಿಚಯ ಮೂಡಿಸುವುದು.
Popular posts from this blog